ಒಣಗಿದ ಸೌದೆ ಉರಿಯುವುದು ಚೆನ್ನ, ಹಸಿ ಸೌದೆ ಬರಿ ಹೊಗೆಯೇ ಅಣ್ಣ.
ಧ್ಯಾನದ ಪರಂಜ್ಯೋತಿ ಬೆಳಗಲು ಸಂಸ್ಕಾರವೆ ಚೆನ್ನ, ತಾಮಸ ರಾಜಸ ಚಂಚಲತೆ ಸಮಯ ವ್ಯರ್ಥವೋ ಅಣ್ಣ.
ವಿಶ್ರಾಂತ ಮನ ನಲಿವುದು ಚೆನ್ನ, ಸುಸ್ತಾದ ಮನ ಧ್ಯಾನವೆಂದು ನಿದ್ರಿಸುವುದೋ ಅಣ್ಣ.
ದ್ಯಾನಕೆ ಕುಳಿತು ನರಳುವುದೇನ್ಚೆನ್ನ ಸ್ವಲ್ಪ ಆಸನಾಭ್ಯಾಸದಿ ಆಸನ ಸಿದ್ದುಸಿಕೋ ಅಣ್ಣ.
ಪ್ರಾಣಾಯಾಮದಿ ಉಸಿರಾಟವು ಚೆನ್ನ, ಕೆಟ್ಟುಸಿರಿನಿಂದ ಧ್ಯಾನವೆಲ್ಲಿಯದೋ ಅಣ್ಣ.
ಊರ ಜಂಜಾಟವ ನೀಗಿಸಲು ಧಾರಣೆಯೇ ಚೆನ್ನ, ಸೊಗಸಾದ ದ್ಯಾನಕೆ ಅನಾಪಾನಾ ಸತಿಯೇ ಅಣ್ಣ
No comments:
Post a Comment