Monday, May 16, 2022

ಬಸವಣ್ಣ ವಚನ ಕುಂಬಳಕಾಯಿಗೆ ಕಬ್ಬುನದ ಕಟ್ಟು ಕೊಟ್ಟರೆ

 

ಬಸವಣ್ಣ ವಚನ

ಕುಂಬಳಕಾಯಿಗೆ ಕಬ್ಬುನದ ಕಟ್ಟು ಕೊಟ್ಟರೆ
ಕೊಳೆವುದಲ್ಲದೆ ಬಲು ಹಾಗಬಲ್ಲುದೇ ?

ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ
ಭಕ್ತಿ ಎಂತಹುದೋ ? ಮುನ್ನಿನಂತೆ

ಕೂಡಲ ಸಂಗಯ್ಯಾ ಮನಹೀನನ ಮೀಸಲು ಕಾಯ್ದಿರಿಸಿದಂತೆ !!

(ಕುಂಬಳಕಾಯಿಗೆ ಕಬ್ಬಿಣದ ಕಟ್ಟು ಹಾಕಿದರೆ ಅದು ಕೊಳೆತುಹೋಗದೆ ಬಲಿತು ದೊಡ್ಡದಾಗುವುದೇ .?
ಪಾಪಾತ್ಮನಿಗೆ ಲಿಂಗದೀಕ್ಷೆ ಕೊಟ್ಟರೆ ಅವನಲ್ಲಿ ಭಕ್ತಿ ಬೆಳೆದು ಮುಕ್ತಿ ದಾರಿ ಹೊಳೆದೀತೆ.?
ಕೂಡಲ ಸಂಗಯ್ಯಾ ಬಾಹ್ಯದ ತೋರಿಕೆಯ ದೀಕ್ಷೆಗಿಂತ ಅಂತರಂಗದ ಶುದ್ಧಿ ಮುಖ್ಯ.)

No comments:

Post a Comment